ಮೈಸೂರಿನಿಂದ ಆಮ್ಲೆಟ್ ಮಾವಿನಕಾಯಿ ಬಂತು ಸಿಂಗಪುರಕ್ಕೆ, ಮತ್ತೆ ಕೇಳಬೇಕೆ ನನ್ನ ಸಡಗರ ಉಪ್ಪಿನಕಾಯಿ ಹಾಕಲಿಕ್ಕೆ ? ನಮ್ಮ ಮನೆಯಲ್ಲಿ ಇದನ್ನು ಎಣ್ಣೆ ಉಪ್ಪಿನಕಾಯಿ ಅಂದೇ ಅಭ್ಯಾಸ. ಊರು ಬಿಟ್ಟು ಬಂದಮೇಲೆ ತಿಳೀತು, ಬೇರೆಕಡೆ ಇದಕ್ಕೆ ಆವಕಾಯಿ ಅಂತ ಕೂಡ ಅಂತಾರೆ ಅಂತ. ಯಾರು ಏನಾದ್ರು ಹೆಸರಿಡಲಿ ಬಿಡಿ, ನಂಗೆ ಉಪ್ಪಿನಕಾಯಿ ರುಚಿ ಮುಖ್ಯ. ಪ್ರತಿ ಸರ್ತಿ ಎಣ್ಣೆ ಇಲ್ಲದ ಉಪ್ಪಿನಕಾಯಿ ಮಾಡುವ ನನ್ನ ನಿಶ್ಚಯ ಬದಲಾಗಿ, ಈ ವರ್ಷ ಎಣ್ಣೆ ಹಾಕಿ ಉಪ್ಪಿನಕಾಯಿ ಮಾಡುವ ಉತ್ಸಾಹ ಹೆಚ್ಚು ಆಯಿತು. ಅದರ ಪರಿಣಾಮ ನಿಮ್ಮ ಮುಂದೆ ಇರುವ ಉಪ್ಪಿನಕಾಯಿ ಫೋಟೋಗಳು ..
ಆಮ್ಲೆಟ್ ಮಾವಿನಕಾಯಿ ಹೇಗಿರತ್ತೆ ನೋಡಿ..
Photo Courtesy : The Hindu
ನಮ್ಮ ಮನೆಯ ಶೈಲಿ ಎಣ್ಣೆ ಉಪ್ಪಿನಕಾಯಿ ಮಾಡುವ ವಿಧಾನ :
ಮಾವಿನಕಾಯಿ ಚೆನ್ನಾಗಿ ತೊಳೆದು, ಅದನ್ನು ಚೆನ್ನಾಗಿ ಒಣಗಿರು ಬಟ್ಟೆಯಲ್ಲಿ ಒರಸಿ ಇಟ್ಟುಕೊಳ್ಳಿ. ಈಲಿಗೆಮನೆ/ಚಾಕು ಕೂಡ ಇದೆ ರೀತಿ ತೊಳೆದು, ಒರಿಸಿ ಇಟ್ಟುಕೊಳ್ಳುವುದು. ಉಪ್ಪಿನಕಾಯಿ ಹಾಕಲಿಕ್ಕೆ ಬೇಕಾದ ಎಲ್ಲ ಪದಾರ್ಥಗಳನ್ನೂ ಇದೆ ರೀತಿ ಸಿದ್ಧ ಮಾಡಿ ಇಟ್ಟುಕೊಳ್ಳುವುದು.
ಮಾವಿನಕಾಯಿಯನ್ನು ಸಣ್ಣ ಹೋಳುಗಳನ್ನಾಗಿ ಹೆಚ್ಚಿ ಇಟ್ಟುಕೊಳ್ಳುವುದು.
ಉಪ್ಪಿನಕಾಯಿಗೆ ಬೇಕಾದ ಪದಾರ್ಥ : (Mango Pieces from 1 Omlette Mango )
ಉಪ್ಪು: 3 ಬಟ್ಟಲು ಹೊಳುಗಳಿಗೆ 1-1.5 ಬಟ್ಟಲು iodine ಇಲ್ಲದ ಉಪ್ಪು
ಕೆಂಪುಮೆಣಸಿನಪುಡಿ(ಅಚ್ಚ ಖಾರದಪುಡಿ) : ೧ ಬಟ್ಟಲು ಹೊಳುಗಳಿಗೆ ೧ ಬಟ್ಟಲು ಕೆಂಪುಮೆಣಸಿನಪುಡಿ
ಹರಿಶಿನದ ಪುಡಿ : ೧ ದೊಡ್ಡ ಚಮಚ
ಕೆಳಗಿನ ಪದಾರ್ಥಗಳನ್ನು ಬಾಣಲೆಯಲ್ಲಿ ಹುರಿದು, ನನತರ ಪುಡಿ ಮಾಡಿ ಇಟ್ಟುಕೊಳ್ಳಿ :
ಸಾಸಿವೆ : ೩ ದೊಡ್ಡ ಚಮಚ (tablespoon)
ಮೆಂತ್ಯೆ: ೩ ದೊಡ್ಡ ಚಮಚ (tablespoon)
ಬೇರೆ ಪದಾರ್ಥ :
ಎಳ್ಳಿನ ಎಣ್ಣೆ : ೧ ಬಟ್ಟಲು
ಹಿಂಗು : ೧ ಸಣ್ಣ ಚಮಚ (teaspoon)
ಉಪ್ಪಿನಕಾಯಿ ಭರಣಿಯಲ್ಲಿ ಮಾವಿನಕಾಯಿ ಹೋಳುಗಳನ್ನು ಉಪ್ಪು ಮತ್ತು ಹರಿಶಿನ ಹಾಕಿ ಬೆರೆಸಿ ಇಡಿ. ಬೇರೆಸಲಿಕ್ಕೆ ಮರದ ಚಮಚ ಉಪಯೋಗಿಸಿದರೆ ಒಳ್ಳೇದು. ಬೆರೆಸಿದ ಹೋಳುಗಳನ್ನು ೫ ಗಂಟೆಗಳ ವರೆಗೆ ಹಾಕೆ ಬಿಡುವುದು. ಉಪ್ಪು ನೀರಾಗಿ ಹರಿಶಿನ ಮತ್ತು ಹೊಳುಗಳ ಜೊತೆಗೆ ಸೇರಿಕೊಳ್ಳುತ್ತದೆ. ಉಪ್ಪು ನೀರು ಬಿಡದಿದ್ದರೆ ೧ ದಿನದವರೆಗೂ ಬತ್ತಲಿನಲ್ಲಿಯೇ ಬಿಡುವುದು. ಉಪ್ಪಿನಕಾಯಿ ಭರಣಿಯ ಮೇಲೆ ತಟ್ಟೆಯನ್ನು ಮುಚಿ ಇಡಿ. ನಮ್ಮಲ್ಲಿ ಭರಣಿ ಇಲ್ಲದ ಕಾರಣ ಪ್ಲಾಸ್ಟಿಕ್ ಡಬ್ಬಿಯಲ್ಲೇ ಹಾಕಬೇಕಾಯಿತು.
ನೀರು ಬಿಟ್ಟ ಹೊಳುಗಳಿಗೆ ಕೆಂಪುಮೆಣಸಿನ ಪುಡಿ, ಸಾಸಿವೆ ಮೆಂತ್ಯೆ ಪುಡಿ ಹಾಕಿ ಬೆರೆಸುವುದು.
ಎಳ್ಳೆಣ್ಣೆಯನ್ನು ಬಾಣಲೆಯಲ್ಲಿ ಬಿಸಿ ಮಾಡಿ, ಅದಕ್ಕೆ ಹಿಂಗು ಸೇರಿಸಿದ ಮೇಲೆ ಒಲೆ ಆರಿಸುವುದು. ಎಣ್ಣೆ ಸಂಪೂರ್ಣವಾಗಿ ತಣ್ಣಗಾದ ಮೇಲೆ ಉಪ್ಪಿನಕಾಯಿ ಹೊಳುಗಳ ಮೇಲೆ ಹಾಕಿ, ಬೆರೆಸಿ, ಮುಚಿ ಇಡಿ. ವಾರಕ್ಕೆ ೨ ರಿಂದ ೩ ಸರ್ತಿ ಮರದ ಚಮಚದಿಂದ ಉಪ್ಪಿನಕ್ಯಿ ಹೋಳುಗಳನ್ನು ಕಲಿಸಿ ಇಡಿ.
೧ ತಿಂಗಳು ಆದಮೇಲೆ ಉಪ್ಪಿನಕಾಯಿಯನ್ನು ಲೊಟ್ಟೆ ಹಾಕಿಕೊಂಡು ತಿನ್ನಬಹುದು. :)
Mango Pickle in Oil :
Every Year the pickle I make sans oil. This year I decided to make pickle in oil because I had the most delicious mango for pickles (Omlete variety) from Mysore. Here is the recipe from my mother, who usually called this pickle in oil rather than avakaya. What is in a name ? Delicious Pickle is more important than a name :p
You need the following to make Mango Pickle in Oil :
Mango Pieces (I used pieces from 1 Omlette Mango)
Salt : 3 cups of closely packed mangoes requires about 1 to 1.5 cups of iodine free salt (depends on the sourness of the mango)
Redchilli Powder : 1 cup (use more if you need it to be ultra spicy)
Turmeric: 1 heaped tbsp
Dryroast/fry the following and powder:
Mustard Seeds : 3 tbsp
Fenugreek Seeds: 3tbsp
You also need :
Sesame Oil : 1 cup (use same cup for all measurements)
Asafoetida : 1tsp
Method:
1.Wash and Wipe all pickle making things including Mangoes in a clean n dry towel.
2.Measure Mangoes and salt. Put them in pickle making jar or any jar you have kept ready. Add turmeric and mix well using a non reactive spoon or wooden spoon. You can simply toss without spilling ... :D
3. Leave this mixture aside till you see most of the salt is turned to water. It takes anything between 5hrs to a day.
4. At this stage, add red chilli powder, mustard fenugreek powder and mix.
5. In a thick bottomed pan, add sesame oil and make it hot. Add asafoetida and switch off the stove. Let the oil cool down.
6. Pour this oil over the pickle and mix well. Close the lid and set it aside without disturbing it. Mix the contents 2 times a week.
7. By the end of 30 days, the pickle is almost ready to eat. Spoon out little pickle in a cup and check it out. Mango pieces would have softened and spices would have settled well.
8. Enjoy the pickle with your favorite dish.